ಅತ್ರಂಜಿಖೇರ
ಉತ್ತರ ಪ್ರದೇಶದ ಎಟಾವ ಜಿಲ್ಲೆಯ ಒಂದು ಗ್ರಾಮ. ಆಲಿಘರ್ ವಿಶ್ವವಿದ್ಯಾನಿಲಯ ಇಲ್ಲಿ ನಡೆಸಿದ ಉತ್ಖನನದಲ್ಲಿ, ಗಂಗಾ ಯುಮುನಾ ಬಯಲಿನ ಮೂರು ಪ್ರಾಚೀನ ಸಂಸ್ಕøತಿಗಳು ಬೆಳಕಿಗೆ ಬಂದಿವೆ. ಕಾವಿಬಣ್ಣದ ಮಡಕೆಗಳನ್ನು ಉಪಯೋಗಿಸುತ್ತಿದ್ದವರ ಸಂಸ್ಕøತಿಯೇ ಅತಿ ಪ್ರಾಚೀನವಾದದ್ದು. ಇದರ ಅನಂತರ ಸೂಕ್ಷ್ಮ ಶಿಲಾಯುಧಗಳನ್ನು ಬಳಸುತ್ತಿದ್ದ, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಗಳು ಉಪಯೋಗವಿದ್ದ ಸಂಸ್ಕøತಿ ಹರಡಿದ್ದಿತು. ತರುವಾಯ ಚಿತ್ರಿತ ಬೂದುಬಣ್ಣದ ಮಡಕೆಗಳ ಉಪಯೋಗವಿದ್ದ ಸಂಸ್ಕøತಿ ಪ್ರಚಲಿತವಾಗಿತ್ತು. ಈ ಕಾಲದಲ್ಲಿ ತಾಮ್ರ ಮತ್ತು ಕಬ್ಬಿಣ ಸಹ ಉಪಯೋಗದಲ್ಲಿತ್ತು. ಇಂಗಾಲ-14ರ ವೈe್ಞÁನಿಕ ಪರೀಕ್ಷೆಯಿಂದ ಈ ಸಂಸ್ಕøತಿಯ ಮಧ್ಯಕಾಲ ಕ್ರಿ.ಪೂ.ಸುಮಾರು 1000ವೆಂದು ತಿಳಿದುಬಂದಿದೆ. ಭಾರತದಲ್ಲಿ ಕಬ್ಬಿಣದ ಉಪಯೋಗದ ಅತಿ ಪ್ರಾಚೀನ ಕುರುಹು ಅತ್ರಂಜಿಖೇರದಲ್ಲಿ ಸಿಕ್ಕುತ್ತದೆ.					
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ